ಕವನ
ನಾ ಕಂಡ ಹುಡುಗಿ ತನ್ನ ಕುಡಿ ನೋಟದಿ
ನನ್ನ ಹೃದಯವ ಕಲಕಿ
ನೂಕಿದಳು ನನ್ನನ್ನು
ಪ್ರೇಮಕ್ಕೆ ತಾ ಸಿಲುಕಿ
ಅಂದ ಚೆಂದದ ಸೋನೆ
ತಾನಾಗಿ ಧರೆಗಿಳಿದು
ಆಸೆ ಹುಟ್ಟಿಸಿದಳವಳು
ಪ್ರೀತಿಯಾ ತಂಪೆರೆದು
ಅವಳ ಬರುವಿಕೆಗಾಗಿ
ನಾ ಕಾಯ್ದು ಸೊರಗಿ
ಬಳಿ ಬಂದು ಹೇಳಿದಳು
ಪ್ರೀತಿಯಲಿ ಗುಡುಗಿ
ಅವಳ ಪ್ರೇಮದಲಿ
ನಾ ಕರಗಿ ನೀರಾಗಿ
ಹರಿಯುತ್ತಿರುವೆ ನೀ ನನ್ನ
ಹೃದಯದಲಿ ನದಿಯಾಗಿ
ಎಂದವಳು ಹೇಳಿದಳು
ಪ್ರೀತಿಯಲಿ ಗುಡುಗಿ
ನಾನಂದು ಕೊಂಡೆನಾಗ
ಇವಳೇ ನಾ ಕಂಡ ಹುಡುಗಿ.
ನನ್ನ ಹೃದಯವ ಕಲಕಿ
ನೂಕಿದಳು ನನ್ನನ್ನು
ಪ್ರೇಮಕ್ಕೆ ತಾ ಸಿಲುಕಿ
ಅಂದ ಚೆಂದದ ಸೋನೆ
ತಾನಾಗಿ ಧರೆಗಿಳಿದು
ಆಸೆ ಹುಟ್ಟಿಸಿದಳವಳು
ಪ್ರೀತಿಯಾ ತಂಪೆರೆದು
ಅವಳ ಬರುವಿಕೆಗಾಗಿ
ನಾ ಕಾಯ್ದು ಸೊರಗಿ
ಬಳಿ ಬಂದು ಹೇಳಿದಳು
ಪ್ರೀತಿಯಲಿ ಗುಡುಗಿ
ಅವಳ ಪ್ರೇಮದಲಿ
ನಾ ಕರಗಿ ನೀರಾಗಿ
ಹರಿಯುತ್ತಿರುವೆ ನೀ ನನ್ನ
ಹೃದಯದಲಿ ನದಿಯಾಗಿ
ಎಂದವಳು ಹೇಳಿದಳು
ಪ್ರೀತಿಯಲಿ ಗುಡುಗಿ
ನಾನಂದು ಕೊಂಡೆನಾಗ
ಇವಳೇ ನಾ ಕಂಡ ಹುಡುಗಿ.
Comments
Post a Comment